ತುರ್ತು ಚಿಕಿತ್ಸೆಯಲ್ಲಿ ಹೊಸ ಮೈಲಿಗಲ್ಲು; 99.6% ಅಂಕಗಳೊಂದಿಗೆ ಸ್ಪರ್ಶ್ ಆಸ್ಪತ್ರೆಯ ಸಾಧನೆ
ಅಂತಾರಾಷ್ಟ್ರೀಯ ಮಟ್ಟದ ಆಂತರಿಕ ಪರಿಶೋಧನೆಯಲ್ಲಿ 99.6% ಸಾಧನೆಯೊಂದಿಗೆ ಭಾರತದ ಆಸ್ಪತ್ರೆಗಳ ತುರ್ತು ಚಿಕಿತ್ಸಾ ವಿಭಾಗದಲ್ಲಿ ಹೊಸ ಮೈಲಿಗಲ್ಲು
ಪತ್ರಿಕಾ ಪ್ರಕಟಣೆ
ಬೆಂಗಳೂರು: ಜುಲೈ 26: ಸ್ಪರ್ಶ್ ಆಸ್ಪತ್ರೆ ಸಮೂಹದ ಹೆಣ್ಣೂರು ಸ್ಪರ್ಶ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕವು ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಐಎಫ್‌ಇಎಂ ಗೋಲ್ಡ್ ಲೆವಲ್ ಪ್ರಮಾಣ ಪತ್ರದ ಸಾಧನೆಯನ್ನುದಾಖಲಿಸಿ ತುರ್ತು ಚಿಕಿತ್ಸಾ ವಿಭಾಗದಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ತುರ್ತು ಚಿಕಿತ್ಸೆಯ ಅಂತಾರಾಷ್ಟ್ರೀಯ ಒಕ್ಕೂಟ (ಇಂಟರ್‌ನ್ಯಾಷನಲ್ ಫೆಡರೇಷನ್ ಫಾರ್ ಎಮರ್ಜೆನ್ಸಿ ಮೆಡಿಸಿನ್/ಐಎಫ್‌ಇಎಂ) ಈ ಪ್ರಮಾಣಪತ್ರವನ್ನು ನೀಡುತ್ತಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಸ್ಪರ್ಶ್ ಆಸ್ಪತ್ರೆ ಹೆಣ್ಣೂರು ಘಟಕಕ್ಕೆ ಜಾಗತಿಕ ಮನ್ನಣೆ ದೊರೆತಿದೆ. ಜರ್ಮನಿಯಲ್ಲಿ ಇತ್ತೀಚೆಗೆ ಆಯೋಜಿತವಾಗಿದ್ದ ತುರ್ತು ಚಿಕಿತ್ಸಾ ವಿಭಾಗದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ (ಐಸಿಇಎಂ) ಈ ಪ್ರಮಾಣಪತ್ರವನ್ನು ಪ್ರಧಾನ ಮಾಡಲಾಯಿತು.
ತುರ್ತು ಚಿಕಿತ್ಸಾ ವಿಭಾಗದಲ್ಲಿ ಜಾಗತಿಕ ಮಟ್ಟದ ಅತ್ಯನ್ನತ ಗುಣಮಟ್ಟಗಳ ಮಾನದಂಡಗಳನ್ನು ಪೂರೈಸುವಲ್ಲಿ ಸ್ಪರ್ಶ್ ಆಸ್ಪತ್ರೆ ಹೆಣ್ಣೂರು ಘಟಕವು ಯಶಸ್ವಿಯಾಗಿದ್ದು ಈ ಸಾಧನೆಗಾಗಿ ಈ ಅಂತಾರಾಷ್ಟ್ರೀಯ ಪ್ರಮಾಣಪತ್ರ ನೀಡಲಾಗಿದೆ.
ಐಎಫ್‌ಇಎಂ ಜಾಗತಿಕವಾಗಿ ಗುರುತಿಸಿದ ಮಾನದಂಡಗಳ ಅಡಿಯಲ್ಲಿ ಡಿಸೆಂಬರ್ 3ರಿಂದ ಡಿಸೆಂಬರ್ 5, 2025 ರವರೆಗೆ ಮಧ್ಯಪ್ರಾಚ್ಯದ ಪ್ರಮುಖ ವರ್ಗೀಕರಣ ಸೊಸೈಟಿ ಟಿಎಎಸ್‌ಎನ್‌ಇಇಎಫ್ (TASNEEF) ಸಹಭಾಗಿತ್ವದಲ್ಲಿ
ಮೂರು ದಿನಗಳ ಕಾಲ ನಡೆಸಿದ ಸಮಗ್ರ ಪರಿಶೋಧನೆಯ ಆಧಾರದಲ್ಲಿ ಪ್ರಮಾಣೀಕರಣವನ್ನು ನೀಡಲಾಗಿದೆ.. ತುರ್ತು ಚಿಕಿತ್ಸಾ ವಿಭಾಗದಲ್ಲಿನ ತುರ್ತು ಚಿಕಿತ್ಸಾ ಪ್ರಕ್ರಿಯೆಯ ವ್ಯವಸ್ಥೆಗಳು, ರೋಗಿಗಳ ರೋಗ ಸ್ಥಿತಿಯ ತೀವ್ರತೆಯನ್ನು ವಿಶ್ಲೇಷಿಸಿ ಆರೈಕೆ ಮಾಡಬೇಕಾದ ತುರ್ತುಸ್ಥಿತಿಯ ಆಧಾರದ ಮೇಲೆ ತ್ವರಿತವಾಗಿ ಮಾಡಲಾಗುವ ಮೌಲ್ಯಮಾಪನ ಮತ್ತು ನೀಡಬೇಕಾದ ಆದ್ಯತೆಯ ಮೇಲೆ ಬಳಸಲಾಗುವ ಪ್ರಮಾಣೀಕೃತ ವ್ಯವಸ್ಥೆಗಳು, ವೈದ್ಯಕೀಯ ಮೂಲಸೌಕರ್ಯಗಳು, ರೋಗಿಗಳ ಸುರಕ್ಷತಾ ವ್ಯವಸ್ಥಾ ಪದ್ಧತಿಗಳು, ಆಡಳಿತ ವ್ಯವಸ್ಥೆ ಹಾಗೂ ತ್ವರಿತ ಸ್ಪಂದನೆಯ ಕಟ್ಟುನಿಟ್ಟಾದ ಮೌಲ್ಯಮಾಪನವನ್ನು ಅನುಸರಿಸಿ, ಅತ್ಯುತ್ತಮ 99.6% ಅಂಕಗಳನ್ನು ಸ್ಪರ್ಶ್ ಆಸ್ಪತ್ರೆ ಹೆಣ್ಣೂರಿನ ತುರ್ತು ಚಿಕಿತ್ಸಾ ಘಟಕವು ಸಾಧಿಸಿದೆ.
ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ.ಶರಣ ಶಿವರಾಜ್ ಪಾಟೀಲ್ ಈ ಸಾಧನೆ ಕುರಿತು ಹೆಮ್ಮೆ ವ್ಯಕ್ತಪಡಿಸುತ್ತಾ " ರೋಗಿಗಳು ಮತ್ತವರ ಕುಟುಂಬಗಳು ಅತ್ಯಂತ ಸಂಕೀರ್ಣ ಮತ್ತು ಕ್ಲಿಷ್ಟಕರ ತುರ್ತು ಪರಿಸ್ಥಿತಿಗಳಲ್ಲಿ ಸ್ಪರ್ಶ್ ಆಸ್ಪತ್ರೆಗಳ ಮೇಲೆ ವಿಶ್ವಾಸವನ್ನಿರಿಸುವುದು ನಮ್ಮ ದೃಷ್ಟಿಕೋನವಾಗಿದೆ.ಈ ನಿಟ್ಟಿನಲ್ಲಿ ಸ್ಪರ್ಶ್ ಆಸ್ಪತ್ರೆಗಳು ಅತ್ಯಂತ ವಿಶ್ವಾಸಾರ್ಹ ಆಸ್ಪತ್ರೆಯಾಗಿ ಹೊರಹೊಮ್ಮಿರುವುದು ಈ ಜಾಗತಿಕ ಮನ್ನಣೆಯ ಸಂಕೇತವಾಗಿದೆ. ರೋಗಿಗಳು ಮತ್ತು ಕುಟುಂಬಗಳು ಜೀವನದ ಅತ್ಯಂತ ನಿರ್ಣಾಯಕ ಕ್ಷಣಗಳಲ್ಲಿ ಸ್ಪರ್ಶ್ ಆಸ್ಪತ್ರೆಗಳ ಮೇಲೆ ತಮ್ಮ ನಂಬಿಕೆ ಹೊಂದಿರುವುದನ್ನು ಈ ಅಂತಾರಾಷ್ಟ್ರೀಯ ಪ್ರಮಾಣೀಕರಣವು ಸಾಬೀತುಪಡಿಸಿದೆ. ತುರ್ತು ವೈದ್ಯಕೀಯ ಚಿಕಿತ್ಸೆಯಲ್ಲಿನ ವೇಗ, ಶ್ರೇಷ್ಟ ಗುಣಮಟ್ಟ, ನಿಖರತೆ ಹಾಗೂ ವೈದ್ಯಕೀಯ ಚಿಕಿತ್ಸೆಗಳಲ್ಲಿನ ಉತ್ಕೃಷ್ಟತೆ ನಮ್ಮ ದೃಷ್ಟಿಕೋನದ ಪ್ರಮುಖ ಅಂಶವಾಗಿದೆ.
99.6% ಅಸಾಧಾರಣ ಅಂಕಗಳೊಂದಿಗೆ ಐಎಫ್‌ಇಎಂನ ಗೋಲ್ಡ್ ಲೆವೆಲ್ ಪ್ರಮಾಣೀಕರಣದ ಸಾಧನೆಯು ಸ್ಪರ್ಶ್ ಆಸ್ಪತ್ರೆಗಳ ಜಾಗತಿಕ ಮಾನದಂಡಗಳ ಅನುಸರಣೆ, ರೋಗಿಗಳ ಸುರಕ್ಷತೆಯಲ್ಲಿ ಎಂದಿಗೂ ರಾಜಿಯಾಗದ ನೀತಿ ಮತ್ತು ನಿರಂತರ ಸುಧಾರಣೆಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಜಾಗತಿಕ ಮಟ್ಟದ ಈ ಮನ್ನಣೆಯು ನಮ್ಮ ವೈದ್ಯಕೀಯ ತಂಡದ ಉತ್ಕೃಷ್ಟ ಚಿಕಿತ್ಸಾ ವಿಧಾನ, ವ್ಯವಸ್ಥೆ ಮತ್ತು ಸಾಮರ್ಥ್ಯಗಳನ್ನು ಮುಂದುವರೆಸುವ ನಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ. ತುರ್ತು ಸ್ಥಿತಿಗಳಲ್ಲಿ ರೋಗಿಯು ಪ್ರತಿಕ್ಷಣ ಕ್ಷಣವೂ ಅತ್ಯುನ್ನತ ಗುಣಮಟ್ಟದ ಆರೈಕೆಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.
ತುರ್ತು ಚಿಕಿತ್ಸಾ ಸಂದರ್ಭಗಳಲ್ಲಿ ವೇಗ, ನಿಖರತೆ ಮತ್ತು ನಿರಂತರ ಸಮನ್ವಯತೆಯು ಕ್ಲಿಷ್ಟಕರವಾದ ರೋಗ ಸ್ಥಿತಿಯಲ್ಲಿರುವ ರೋಗಿಯ ಚಿಕಿತ್ಸೆಯಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುವಲ್ಲಿ ನಿರ್ಣಾಯಕವಾಗಿರುತ್ತದೆ. 10 ಅಧ್ಯಾಯಗಳು ಮತ್ತು 200ಕ್ಕೂ ಹೆಚ್ಚು ಪ್ರಮುಖ ಮಾನದಂಡಗಳನ್ನು ಅಂತರರಾಷ್ಟ್ರೀಯ ಮಾನದಂಡಗಳೊಂದಿಗೆ ಜೋಡಿಸಲಾಗಿದ್ದ ಈ ಗೋಲ್ಡ್ ಪರ್ರಮಾಣೀಕರಣವು ಚಿಕಿತ್ಸೆಯಲ್ಲಿನ ಉತ್ಕೃಷ್ಟತೆ ಮತ್ತು ಮತ್ತು ರೋಗಿಗಳ ಸುರಕ್ಷತೆಯ ಮೇಲಿನ ನಮ್ಮ ಬದ್ಧತೆಯನ್ನು ಇನ್ನಷ್ಟು ಬಲಪಡಿಸುತ್ತದೆ. ಸ್ಪರ್ಶ್ ಆಸ್ಪತ್ರೆಯು ಈ ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆದ ದೇಶದ ಮೊಟ್ಟ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆ ನಮ್ಮದಾಗಿದೆ ಎಂದು ಸ್ಪರ್ಶ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಹಿರಿಯ ಸಲಹೆಗಾರ ಮತ್ತು ಸಮೂಹ ಮುಖ್ಯಸ್ಥ ಡಾ.ಟಿ.ಎಸ್.ಶ್ರೀನಾಥ್ ಕುಮಾರ್ ಅಭಿಪ್ರಾಯಪಟ್ಟರು.
ರೋಗಿಗಳ ದೃಷ್ಟಿಕೋನದಲ್ಲಿ ಈ ಅಂತಾರಾಷ್ಟ್ರೀಯ ಮನ್ನಣೆಯು ಸ್ಪರ್ಶ್ ಆಸ್ಪತ್ರೆಗಳಲ್ಲಿ ಗೋಲ್ಡನ್ ಅವರ್ ಎಂದು ಕರೆಯಲಾಗುವ ನಿರ್ಣಾಯಕ ಹಂತದಲ್ಲಿ ತುರ್ತು ಚಿಕಿತ್ಸಾ ವಿಭಾಗಗಳಲ್ಲಿ ರೋಗಿಗಳ ರೋಗ ಸ್ಥಿತಿಯ ತೀವ್ರತೆಯನ್ನು ವಿಶ್ಲೇಷಿಸಿ ಆರೈಕೆ ಮಾಡಬೇಕಾದ ತುರ್ತುಸ್ಥಿತಿಯ ಆಧಾರದ ಮೇಲೆ ತ್ವರಿತವಾಗಿ ಮಾಡಲಾಗುವ ಮೌಲ್ಯಮಾಪನ ಮತ್ತು ನೀಡಬೇಕಾದ ಆದ್ಯತೆಯ ಮೇಲೆ ಬಳಸಲಾಗುವ ಪ್ರಮಾಣೀಕೃತ ವ್ಯವಸ್ಥೆಗಳ ಅಂತಾರಾಷ್ಟ್ರೀಯ ಮಾನದಂಡಗಳ ಪ್ರತೀಕವಾಗಿದೆ, ತೀವ್ರ ತೆರನ ಆಘಾತಗಳು, ಹೃದ್ರೋಗಗಳ ತುರ್ತುಸ್ಥಿತಿಗಳು, ಪಾರ್ಶ್ವವಾಯು, ಮಕ್ಕಳ ತುರ್ತುಸ್ಥಿತಿಗಳು ಅಥವಾ ಇತರ ಸಂಕೀರ್ಣ ವೈದ್ಯಕೀಯ ಪರಿಸ್ಥಿತಿಗಳಲ್ಲಿ ಹೆಣ್ಣೂರು ರಸ್ತೆಯ ಸ್ಪರ್ಶ್ ಆಸ್ಪತ್ರೆಯು ಜಾಗತಿಕ ಮಟ್ಟದ ಅತ್ಯುತ್ತಮ ಚಿಕಿತ್ಸಾ ಪದ್ಧತಿಗಳೊಂದಿಗೆ, ಸಮನ್ವಯಿತ ಹಾಗೂ ಅತ್ಯುತ್ಕೃಷ್ಟ ಗುಣಮಟ್ಟದ ತುರ್ತು ಆರೈಕೆಯನ್ನು ನೀಡಲು ಸಜ್ಜಾಗಿರುವುದನ್ನು ಈ ಜಾಗತಿಕ ಪ್ರಮಾಣೀಕರಣವು ಸಾಬೀತು ಮಾಡಿದೆ. .
ಈ ಮೈಲಿಗಲ್ಲಿನೊಂದಿಗೆ, ಸ್ಪರ್ಶ್ ಆಸ್ಪತ್ರೆಯು ತುರ್ತು ಚಿಕಿತ್ಸಾ ವಿಭಾಗದಲ್ಲಿ ಅತ್ಯುನ್ನತ ಗುಣಮಟ್ಟವನ್ನು ಸಾಧಿಸಿರುವ ವಿಶ್ವದಾದ್ಯಂತದ ಕೆಲವೇ ಕೆಲವು ಗಣ್ಯ ಆಸ್ಪತ್ರೆಗಳ ಗುಂಪಿಗೆ ಸೇರ್ಪಡೆಗೊಂಡಿದೆ. ಈ ಜಾಗತಿಕ ಮನ್ನಣೆಯು ಸಂಕೀರ್ಣ ಮತ್ತು ನಿರ್ಣಾಯಕ ಆರೋಗ್ಯ ಅಗತ್ಯತೆಗಳನ್ನು ಹೊಂದಿರುವ ರೋಗಿಗಳಿಗೆ ವಿಶ್ವ ದರ್ಜೆಯ ಆರೈಕೆಯನ್ನು ತಲುಪಿಸುವ ಹೆಣ್ಣೂರು ರಸ್ತೆಯಲ್ಲಿರುವ ಸ್ಪರ್ಶ್ ಆಸ್ಪತ್ರೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ.
Comments
No comments yet. Be the first to comment!
Add a Comment