"ತೀವ್ರಆಘಾತ,ಹೃದ್ರೋಗ#Stroke or ಮಕ್ಕಳ ತುರ್ತುಸ್ಥಿತಿ. ಹೆಣ್ಣೂರು ಸ್ಪರ್ಶ್ ನಲ್ಲಿ ತ್ವರಿತಗತಿ ಚಿಕಿತ್ಸೆ#sparsh#yt
ಈಗ ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಹೆಮ್ಮೆಯ ಇತಿಹಾಸ ಸೃಷ್ಟಿಯಾಗಿದೆ! ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆ (SPARSH Hospital) ದೇಶದಲ್ಲೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ IFEM Gold Level Certification ಪಡೆದು ವಿಶ್ವದ ಗಮನ ಸೆಳೆದಿದೆ. ಅದೂ ಬರೋಬ್ಬರಿ 99.6% ಸ್ಕೋರ್‌ನೊಂದಿಗೆ "ಏನಿದು IFEM ಗೋಲ್ಡ್ ಸರ್ಟಿಫಿಕೇಟ್? ಇದರ ಪ್ರಾಮುಖ್ಯತೆ ಏನು? ಪ್ರತಿಯೊಬ್ಬ ರೋಗಿಗೂ ಇದರಿಂದ ಸಿಗುವ ಪ್ರಯೋಜನವೇನು? ಬನ್ನಿ, ಈ ವೀಡಿಯೋದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ!" ಇಂಟರ್‌ನ್ಯಾಷನಲ್ ಫೆಡರೇಷನ್ ಫಾರ್ ಎಮರ್ಜೆನ್ಸಿ ಮೆಡಿಸಿನ್ (IFEM) ನೀಡುವ ಈ ಅತ್ಯುನ್ನತ ಗೌರವವನ್ನು ಇತ್ತೀಚೆಗೆ ಜರ್ಮನಿಯಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರದಾನ ಮಾಡಲಾಯಿತು. ಮಧ್ಯಪ್ರಾಚ್ಯದ ಪ್ರಮುಖ ಸಂಸ್ಥೆ 'TASNEEF' ಸಹಭಾಗಿತ್ವದಲ್ಲಿ, 10 ಅಧ್ಯಾಯಗಳು ಮತ್ತು 200ಕ್ಕೂ ಹೆಚ್ಚು ಕಠಿಣ ಮಾನದಂಡಗಳನ್ನು ಪರಿಶೀಲಿಸಲಾಯಿತು. ರೋಗಿಯ ತೀವ್ರತೆ ವಿಶ್ಲೇಷಣೆ (Triage System), ವೈದ್ಯಕೀಯ ಮೂಲಸೌಕರ್ಯ ಮತ್ತು ತ್ವರಿತ ಸ್ಪಂದನೆಯನ್ನು ಅಳೆದು ಈ 99.6% ಅಂಕ ನೀಡಲಾಗಿದೆ!
Comments
No comments yet. Be the first to comment!
Add a Comment